Advertisement boards 
ಜಿಲ್ಲಾ ಸುದ್ದಿ

ಬೆಂಗಳೂರು ಇನ್ನು ಜಾಹೀರಾತು ಮುಕ್ತ

ಸರ್ಕಾರ ಫ್ಲೆಕ್ಸ್, ಬ್ಯಾನರ್‍ಗಳನ್ನು ಮಾತ್ರ ನಿಷೇಧಿಸಲು ನಿರ್ಧರಿಸಿದ್ದರೆ, ಬಿಬಿಎಂಪಿ ಒಂದು ಹೆಜ್ಜೆ ಮುಂದಿರಿಸಿ ಎಲ್ಲ ರೀತಿಯ...

ಬೆಂಗಳೂರು: ಸರ್ಕಾರ  ಫ್ಲೆಕ್ಸ್,  ಬ್ಯಾನರ್‍ಗಳನ್ನು ಮಾತ್ರ ನಿಷೇಧಿಸಲು ನಿರ್ಧರಿಸಿದ್ದರೆ, ಬಿಬಿಎಂಪಿ ಒಂದು ಹೆಜ್ಜೆ ಮುಂದಿರಿಸಿ ಎಲ್ಲ ರೀತಿಯ ಜಾಹೀರಾತುಗಳನ್ನೂ ನಿಷೇಧಿಸಿದೆ. ಆದರೆ, ಇದು ಜಾರಿಯಾಗಲು ಸರ್ಕಾರ ಅನುಮತಿ ನೀಡಬೇಕಿದೆ.
ಮೇಯರ್ ಶಾಂತಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಜಾಹೀರಾತು ನಿಷೇಧಿ ಸುವ ನಿರ್ಣಯ ಕೈಗೊಳ್ಳಲಾಯಿತು. ಬಿಜೆಪಿ ಸದಸ್ಯ ಮಂಜುನಾಥ ರಾಜು ಅವರ ಪ್ರಸ್ತಾಪವನ್ನು ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಮಂಡಿಸಿದರೆ, ಇದಕ್ಕೆ ಶಾಂತಕುಮಾರಿ ಅನುಮೋದನೆ ನೀಡಿದರು. ಈ ನಿರ್ಣಯವನ್ನು ಆಯುಕ್ತ ಲಕ್ಷ್ಮಿ ನಾರಾಯಣ ಸರ್ಕಾರದ ಅನುಮತಿಗೆ  ಕಳುಹಿಸಲಿದ್ದಾರೆ .

ಈ ಮಧ್ಯೆ, ನಗರದಲ್ಲಿ  ಫ್ಲೆಕ್ಸ್ ಮತ್ತು ಬ್ಯಾನರ್‍ಗಳನ್ನು ನಿಷೇಧಿಸಲು ಸರ್ಕಾರವೇ ಮುಂದಾಗಿರುವ ಹಿನ್ನೆಲೆಯಲ್ಲಿ, ಈ ನಿರ್ಣಯವನ್ನು ಸರ್ಕಾರ ಒಪ್ಪಿಕೊಳ್ಳುತ್ತದೆ ಎಂದು ಬಿಬಿಎಂಪಿ ನಿರೀಕ್ಷಿಸಿದೆ. ನಗರದಲ್ಲಿ ಜಾಹೀರಾತುಗಳಿಂದ ಬಿಬಿಎಂಪಿಗೆ ಬರೀ ರು . 21 ಕೋಟಿ ಆದಾಯ ಸಿಗುತ್ತಿದ್ದು,ಇದರಲ್ಲಿ ನಿರ್ವಹಣೆ, ಕಾನೂನು ಹೋರಾಟ ಮತ್ತು ಜಾಹೀರಾತು ವಿಭಾಗದ ವೆಚ್ಚ ಕಳೆದರೆ ಉಳಿಯುವುದು ಕೇವಲ ರು.  13 ಕೋಟಿ. ಆದ್ದರಿಂದ ಈ ವಿಭಾಗದಲ್ಲಿರುವ ಸಿಬ್ಬಂದಿಯನ್ನು ತೆರಿಗೆ ಸಂಗ್ರಹಕ್ಕೆ ನಿಯೋ ಜಿಸಿದರೆ ಹೆಚ್ಚುವರಿ ರು . 200 ಕೋಟಿ ಸಂಗ್ರಹವನ್ನಾದರೂ ಮಾಡಬಹುದು. ಕೇವಲ ರು.  13 ಕೋಟಿ ಆದಾಯಕ್ಕಾಗಿ ಜಾಹೀರಾತು ನಿರ್ವಹಣೆ ಮಾಡಿಕೊಂಡು ನಿತ್ಯ ಕೋರ್ಟ್ ಮತ್ತು ಮಾಧ್ಯಮಗಳಿಂದ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಆದ್ದರಿಂದ ಜಾಹೀರಾತುಗಳನ್ನೇ ನಿಷೇ„ಸುವುದು ಸೂಕ್ತ ಎಂದು ಮಂಜುನಾಥ ರಾಜು ಸಭೆಗೆ ವಿವರಿಸಿದ್ದರು. ಆಡಳಿತ ಪಕ್ಷ ನಾಯಕ ಎನ್.ಆರ್.ರಮೇಶ್, ಪದ್ಮನಾಭ ರೆಡ್ಡಿ, ಎಸ್.ಹರೀಶ್, ಎ.ಎಚ್. ಬಸವರಾಜು ಸೇರಿದಂತೆ ಆಡಳಿತ ಪಕ್ಷದ ಅನೇಕ ಸದಸ್ಯರು ಹಾಗೂ ಪ್ರತಿಪಕ್ಷದ ಸದಸ್ಯರೂ ಅವರ ಪ್ರಸ್ತಾಪವನ್ನು ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿರ್ಣಯ ಮಂಡಿಸಿ ಅನುಮೋದಿಸಲಾಯಿತು.


ಜಾಹೀರಾತು ಹಾಕಿದರೆ ಕ್ರಿಮಿನಲ್ ಕೇಸು

ಬಿಬಿಎಂಪಿ ಕೈಗೊಂಡಿರುವ ನಿರ್ಣಯದ ಪ್ರಕಾರ, ಪಾಲಿಕೆಯ ವ್ಯಾಪ್ತಿಯಲ್ಲಿಇನ್ನುಮುಂದೆ ಯಾ ವುದೇ ಜಾಹೀರಾತನ್ನೂ ಹಾಕುವಂತಿಲ್ಲ. ಯಾವುದೇ ಜಾಹೀರಾತು ಅಳವಡಿಸುವುದಕ್ಕೆ ಅನುಮತಿ ನೀಡುವಂತೆಯೂ ಇಲ್ಲ. ಈಗಾಗಲೇ ಅಳವಡಿಸಿರುವ ಅಧಿಕೃತ ಹಾಗೂ ಅನಧಿಕೃತ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸಬೇಕು. ಒಂದೊಮ್ಮೆ ನಿಷೇಧದ ನಡುವೆಯೂ ಜಾಹೀರಾತು ಹಾಕಿದರೆ, ಜಾಹೀರಾತು ಹಾಕಿದ ಸಂಸ್ಥೆ ಹಾಗೂ ಜಾಹೀರಾತು ಫ ಲಕದಲ್ಲಿ ಪ್ರದರ್ಶನವಾಗುವ ಸಂಸ್ಥೆ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುತ್ತದೆ. ಎಲ್ಲಾದರೂ ಜಾಹೀರಾತು ಹಾಕಿರುವುದು ಕಂಡುಬಂದರೆ ಅದನ್ನು ಬಿಬಿಎಂಪಿ ವಲಯ ಅಧಿಕಾರಿಗಳು ತಕ್ಷಣ ತೆರವುಗೊಳಿಸಬೇಕು. ಹಾಗೆಯೇ  ಅಳವಡಿಸಿದ ಸಂಸ್ಥೆ ಅಥವಾ ವ್ಯಕ್ತಿ ವಿರುದ್ಧ  ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ವಲಯ ಜಂಟಿ ಅಥವಾಹೆಚ್ಚುವರಿ ಆಯುಕ್ತರನ್ನೇ ಹೊಣೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.

ಅಂಗಡಿ ಬೋರ್ಡ್‍ಗಷ್ಟೇ ಅವಕಾಶ
ನಗರದಲ್ಲಿ ಖಾಸಗಿ ಆಸ್ತಿ ಮತ್ತು ಕಟ್ಟಡಗಳಲ್ಲಿ, ಕಟ್ಟಡಗಳ ಚಾವಣಿಗಳಲ್ಲಿ ಹಾಗೂ ವಾಣಿಜ್ಯ ಸಂಸ್ಥೆಗಳು,ಮಾಲ್‍ಗಳಲ್ಲಿ ಹಾಕಿರುವ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಅಂಗಡಿಗಳು ಮತ್ತು ಮಳಿಗೆಗಳು ಸಂಸ್ಥೆಯ ಹೆಸರು ಮತ್ತು ವಿಳಾಸ ಇರುವ ಫಲಕವನ್ನು ಮಾತ್ರ ಹಾಕಿಕೊಳ್ಳಬಹುದು. ಆ ಫಲಕಗಳು ಕೂಡಇಂತಿಷ್ಟೇ ಅಗಲ ಮತ್ತು ಉದ್ದ ಇರಬೇಕೆಂಬ ನಿಯಮಗಳಿರುತ್ತವೆ. ವಾಣಿಜ್ಯ ಸಂಸ್ಥೆಗಳು ಹೆಸರಿನ ಫಲಕದ ನೆಪದಲ್ಲಿ ಯಾವುದೇ ಜಾಹೀರಾತುಗಳನ್ನು
ಹಾಕಿಕೊಳ್ಳುವಂತಿಲ್ಲ.

ಯಾವ ಉದ್ದೇಶಕ್ಕಾಗಿ ನಿಷೇಧ?


  • ಸೌಂದರ್ಯಕ್ಕೆ ಆಗುವ ಧಕ್ಕೆ ತಡೆಯಲು
  •  ಅಪಘಾತಗಳನ್ನು ತಪ್ಪಿಸಲು
  • ಆಡಳಿತಾತ್ಮಕ ಶಿಸ್ತು ಕಾಪಾಡಲು
  •  ಪರಿಸರ ಸಂರಕ್ಷಿಸುವುದಕ್ಕಾಗಿ
  •  ಹೈಕೋರ್ಟ್, ಲೋಕಾಯುಕ್ತ ಛೀಮಾರಿ  ತಪ್ಪಿಸಿಕೊಳ್ಳಲು
  •  ಅಧಿಕಾರಿಗಳನ್ನು ತೆರಿಗೆ ಸಂಗ್ರಹಕ್ಕೆ ನಿಯೋಜಿಸಲು
  •  ಜಾಹೀರಾತು ಹೆಸರಿನಲ್ಲಿ ಅಕ್ರಮವನ್ನು ತಡೆಯಲು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ